ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್, ಚಿಕ್ಕಬಳ್ಳಾಪುರ, ಕಾಲೇಜಿನ ಕನ್ನಡ ವಿಭಾಗವು ಕನ್ನಡ ಸಾಹಿತ್ಯದ ಎಲ್ಲಾ ಚಟುವಟಿಕೆ ಹಾಗೂ ಕಾರ್ಯಕ್ರಮಗಳನ್ನು ವಿಭಾಗದ ಶ್ರೀ ಅಂಬರೀಶ್ ಎ., ಶ್ರೀಮತಿ ಲಕ್ಷ್ಮಿದೇವಿ ಎನ್., ಶ್ರೀಮತಿ ಶೋಭಾ ಬಿ.ವಿ., ಶ್ರೀ. ಸುರೇಶ್ ಎನ್., ಶ್ರೀ ಸಿದ್ಧರಾಮು ಅವರುಗಳು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಗಡಿನಾಡಿಗೆ ಹೊಂದಿಕೊಂಡಿರುವ ಕಾಲೇಜು ಇಂದಿನ ಆಧುನಿಕತೆಯ ಅಬ್ಬರದ ನಡುವೆ ಯಾಂತ್ರಿಕವಾಗುತ್ತಿರುವ ವಿದ್ಯಾರ್ಥಿಗಳ ಮನಸ್ಸಿಗೆ ಕನ್ನಡ ಸಾಹಿತ್ಯದ ಎಲ್ಲಾ ಆಯಾಮಗಳ ಪರಿಚಯವನ್ನು ಸಾಹಿತ್ಯಿಕ ಸ್ಪರ್ಧೆಗಳು, ಉಪನ್ಯಾಸ, ಕಮ್ಮಟ, ಪ್ರಕಟಣೆಗಳು, ರಾಷ್ಟ್ರೀಯ, ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ವಿದ್ಯಾರ್ಥಿಗಳಿಂದ ಪ್ರಬಂಧ ಮಂಡನೆ, ವಿದ್ಯಾರ್ಥಿಗಳಿಂದಲೇ ರಚಿತವಾದ ಕನ್ನಡ ಕವನ ಸಂಕಲನ ಪುಸ್ತಕ “ಪಾತರಗಿತ್ತಿ”,”ಸವಿ ಕನ್ನಡ–ನಲಿ ಕನ್ನಡ” ಮುಂತಾದ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಸಹಿತ್ಯಾಸಕ್ತಿಯನ್ನು ಬೆಳೆಸುತ್ತಿದ್ದೇವೆ.ಕನ್ನಡ ಭಾಷೆಯ ಬಗೆಗೆ ಇನ್ನಷ್ಟು ಒಲವು, ಆಸಕ್ತಿನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳು ನಡೆಯುತ್ತಿದೆ.ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಮೂಡಿಸಲು ಬಯಲು ಬಂಧೀಖಾನೆ ಭೇಟಿ, ವೃದ್ಧಾಶ್ರಮ, ಅನಾಥಶ್ರಮ ಭೇಟಿ, ಪ್ರಕೃತಿಯೆಡೆಗೆ ಎನ್ನುವ ವಿನೂತನ ಕಾರ್ಯಕ್ರಮದ ಮೂಲಕ ಪರಿಸರ ಕಾಳಜಿಯನ್ನು ಮೂಢಿಸುವ ಪ್ರಯತ್ನ ನಿರಂತರವಾಗಿ ಸಾಗಿದೆ. ಇಲ್ಲಿನ ಕನ್ನಡ ವಿಭಾಗವು ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿಯ ಜೊತೆಗೆ ಸಮಾಜದ ಸುಸಂಸ್ಕೃತ ವ್ಯಕ್ತಿಗಳನ್ನಾಗಿ ಮಾಡುವ ಗುರಿ ಹೊಂದಿದೆ. ಅಷ್ಟೇ ಅಲ್ಲದೆ ಕನ್ನಡ ವಿಭಾಗದ ವತಿಯಿಂದ ರಾಷ್ಷ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರ ಸಂಕಿರಣ, ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮ(FDP) ಗಳ ಮೂಲಕ ಕನ್ನಡ ಸಾಹಿತ್ಯಿಕ ಚಟುವಟಿಕಗಳು ಸಕ್ರಿಯವಾಗಿ ನಡೆಯುತ್ತಿವೆ.
ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಅಧ್ಯಯನದ ಮೂಲಕ ಕನ್ನಡ ಭಾಷೆ, ನೆಲ–ಜಲದ ಸಂರಕ್ಷಣೆ, ಸಾಂಸ್ಕೃತಿಕ ಅರಿವು, ಮಾನವೀಯ ಮೌಲ್ಯಗಳನ್ನು ತಿಳಿಸುವ ಮೂಲಕ ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡುವುದು.
Sl. | Name of the faculty | Qualification | Designation | Experience in Yrs | Specialization | Articles published in ISSN/ISBN | Papers presented in conference |
1 | Mr. AMBARISHA A | M A in Kannada, NET, B.Ed | Assistant professor & Coordinator | 13 | Janapada& bhashantara | 02 | 02 |
2 | Mrs. LAKSHMIDEVI N | M.A., P.G.D.K.S., NET (Ph.D) | Assistant professor | 13 | Kannada | 26 | 24 |
3 | Mrs. SHOBHA B.V. | M A in Kannada, KSET | Associate professor | 17 | Kannada | 06 | 06 |
4 | Mr. SURESHA.N | M.A, B.Ed., NET.,(Ph.D) | Assistant professor | 11 | Janapada
| 01 | 01 |